Breaking News

ಶಿಕ್ಷಕ-ಪದವೀಧರರ ಆಧಾರ ಸ್ತಂಭ ಗಟ್ಟಿಗೊಳಿಸಲು ಕಾಂಗ್ರೆಸ್‌ನಿಂದ ಮಾತ್ರ ಸಾಧ್ಯ

Spread the love

ಶಿಕ್ಷಕ-ಪದವೀಧರರ ಆಧಾರ ಸ್ತಂಭ ಗಟ್ಟಿಗೊಳಿಸಲು ಕಾಂಗ್ರೆಸ್‌ನಿಂದ ಮಾತ್ರ ಸಾಧ್ಯ

ರಾಜ್ಯದಲ್ಲಿ ಶಿಕ್ಷಕರ ಹಾಗು ಪದವೀಧರರನ್ನು ಉತ್ತಮ ಹಾಗು ಉನ್ನತಮಟ್ಟಕ್ಕೇರಿಸಲು ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯವೆಂದು ವಿಧಾನ ಪರಿಷತ್ ವಿಪಕ್ಷ ನಾಯಕ ಎಸ್.ಆರ್. ಪಾಟೀಲ ತಿಳಿಸಿದರು.

ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲ್ಲೂಕಿನ
ರಾಮಪೂರದ ದಾನೇಶ್ವರಿ(ಬಿಳ್ಳೂರ) ಸಮುದಾಯ ಭವನದಲ್ಲಿ ನಡೆದ ವಾಯುವ್ಯ ಶಿಕ್ಷಕ ಹಾಗು ಪದವೀಧರ ಚುನಾವಣೆ ಪ್ರಚಾರದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಶಿಕ್ಷಕ ಕ್ಷೇತ್ರದಿಂದ ಕಣಕ್ಕಿಳಿದಿರುವ ಹಿರಿಯ ಕಾಂಗ್ರೆಸ್‌ನ ಹುರಿಯಾಳು ಪ್ರಕಾಶ ಹುಕ್ಕೇರಿ ಉತ್ತರ ಕರ್ನಾಟಕದ ಜನತೆಯ ಆಶಾಕಿರಣವಾಗಿ ಶ್ರಮಿಸಿದವರು. ರಾಜ್ಯದ ರೈತರಿಗೆ ಅದರಲ್ಲೂ ಬಾಗಲಕೋಟೆ ಜಿಲ್ಲೆಯ ಶೇ.80 ರಷ್ಟು ಕಬ್ಬು ಬೆಳೆಗಾರರೇ ಆಗಿದ್ದು, ಪ್ರಥಮ ಬಾರಿಗೆ ಉತ್ತಮ ಬೆಲೆಯನ್ನು ಸಕ್ಕರೆ ಕಾರ್ಖಾನೆಗಳಿಂದ ಒದಗಿಸುವಲ್ಲಿ ಯಶಸ್ವಿ ಕಂಡು ಪ್ರತಿ ಟನ್‌ಗೆ 2300 ರೂ.ಗಳೊಂದಿಗೆ ಸರ್ಕಾರದ ಬೊಕ್ಕಸದಿಂದ ಟನ್‌ಗೆ 200 ರೂ.ಗಳಂತೆ ಒಟ್ಟು 1800 ಕೋಟಿ ರೂ.ಗಳನ್ನು ನೀಡುವಲ್ಲಿ ಯಶಸ್ಸು ಕಂಡು ರೈತರ ಮನಸ್ಸಲ್ಲಿ ಛಾಪು ಒತ್ತಿದವರು.

ಇದೀಗ ಶಿಕ್ಷಕರ ಭವಿಷ್ಯವನ್ನು ಬಲಪಡಿಸುವಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದು, ಅದರಂತೆ ಪದವೀಧರ ಕ್ಷೇತ್ರದಿಂದ ಸುನೀಲ ಸಂಕ ಸಾಕಷ್ಟು ಕಾರ್ಯಗಳನ್ನು ನಡೆಸಿ, ಪ್ರಮುಖವಾಗಿ ಉತ್ತರ ಕರ್ನಾಟಕ ಪ್ರಾದೇಶಕ ಅಸಮಾನತೆಯನ್ನು ಹೋಗಲಾಡಿಸುವಲ್ಲಿ ಮುಂಚೂಣಿ ಪಾತ್ರ ವಹಿಸಿದವರು. ಇವರ ಬೆಂಬಲದಿಂದ ಚುನಾಯಿತಗೊಳಿಸಿದ್ದಲ್ಲಿ ರಾಜ್ಯವಷ್ಟೇ ಅಲ್ಲದೆ ದೇಶವೂ ಪ್ರಬಲವಾಗುವದೆಂದು ಎಸ್.ಆರ್. ತಿಳಿಸಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಮಾಜಿ ಸಚಿವೆ ಉಮಾಶ್ರೀ, ಗಣೇಶ ಹುಕ್ಕೇರಿ, ಶರ್ಮಾ, ಎಸ್.ಜಿ. ನಂಜಯ್ಯನಮಠ, ಸತೀಶ ಬಂಡಿವಡ್ಡರ ಮಾತನಾಡಿದರು.

ಈ ಸಂದರ್ಭದಲ್ಲಿ
ಬಸವರಾಜ ಕುಮಸಗಿ, ಸಿದ್ದಣ್ಣ ಕೊಣ್ಣೂರ, ಡಾ. ಎ.ಆರ್. ಬೆಳಗಲಿ, ಪ್ರವೀಣ ನಾಡಗೌಡ, ದಯಾನಂದ ಪಾಟೀಲ, ಪ್ರವೀಣ ನಾಡಗೌಡ, ಶಂಕರ ಜಾಲಿಗಿಡದ, ಸತ್ಯಪ್ಪ ಮಗದುಮ್, ಬಸವರಾಜ ಕೊಣ್ಣೂರ, ರಾಜು ಭದ್ರನ್ನವರ, ಸಿದ್ದಪ್ಪ ಮೇಣಿ, ಲಕ್ಷ್ಮಣ ದೇಸಾರೆಟ್ಟಿ ಸೇರಿದಂತೆ ಅನೇಕರಿದ್ದರು.

ವರದಿ : ಪ್ರಕಾಶ ಕುಂಬಾರ


Spread the love

About Fast9 News

Check Also

ರಾಷ್ಟ್ರೀಯ ಮಾನವ ಹಕ್ಕು ಆಯೋಗಕ್ಕೆ ಮರು ನೇಮಕ

Spread the loveರಾಷ್ಟ್ರೀಯ ಮಾನವ ಹಕ್ಕು ಆಯೋಗಕ್ಕೆ ಮರು ನೇಮಕ ಗೋಕಾಕ ಏ, 20 :- ರಾಷ್ಟ್ರೀಯ ಮಾನವ ಹಕ್ಕುಗಳ …

Leave a Reply

Your email address will not be published. Required fields are marked *