Breaking News

ರಾಯಬಾಗದಲ್ಲಿ ಬಾಳೆ ಹಣ್ಣು ವ್ಯಾಪಾರಿ ಮಹಿಳೆ ಮೇಲೆ ಆ್ಯಸಿಡ್​ ದಾಳಿ

Spread the love

ರಾಯಬಾಗದಲ್ಲಿ ಬಾಳೆ ಹಣ್ಣು ವ್ಯಾಪಾರಿ ಮಹಿಳೆ ಮೇಲೆ ಆ್ಯಸಿಡ್​ ದಾಳಿ

ಬೆಳಗಾವಿ ಜಿಲ್ಲೆ ರಾಯಬಾಗ ಪಟ್ಟಣದ ಶಾಹು ಮಹಾರಾಜ ವೃತ್ತದ ಬಳಿ ಬಾಳೆ ಹಣ್ಣು ಮಾರಾಟ ಮಾಡುತ್ತಿದ್ದ ಮಹಿಳೆ ಮೇಲೆ ಆ್ಯಸಿಡ್​​ ದಾಳಿ ಮಾಡಿರುವ ಘಟನೆ ರಾಯಬಾಗ ಪಟ್ಟಣದಲ್ಲಿ ನಡೆದಿದೆ.ಅಪರಿಚಿತನೋರ್ವ ಯಾಸ್ಮೀನ್​ ಮೇಲೆ ಆ್ಯಸಿಡ್​ ಚೆಲ್ಲಿ ಪರಾರಿಯಾಗಿದ್ದಾನೆ. ​
ಮಹಿಳೆಯ ಹೊಟ್ಟೆ ಹಾಗೂ ಕುತ್ತಿಗೆ ಭಾಗದಲ್ಲಿ ತೀವ್ರ ಗಾಯಗಾಳಾಗಿವೆ.

ಪಟ್ಟಣದ ಯಾಸ್ಮೀನ್​ ತಹಶಿಲ್ದಾರ (35) ಆ್ಯಸಿಡ್ ದಾಳಿಗೆ ತುತ್ತಾದ ​ಮಹಿಳೆ. ಇಲ್ಲಿನ ಶಾಹುಮಹಾರಾಜ ವೃತ್ತದ ಬಳಿ ಹಣ್ಣು ಮಾರಾಟ ಮಾಡುವ ವೇಳೆ ಅಪರಿಚಿತನೋರ್ವ ಯಾಸ್ಮೀನ್​ ಮೇಲೆ ಆ್ಯಸಿಡ್​ ಚೆಲ್ಲಿ ಪರಾರಿಯಾಗಿದ್ದಾನೆ. ​ಪರಿಣಾಮ ಮಹಿಳೆಯ ಹೊಟ್ಟೆ ಹಾಗೂ ಕುತ್ತಿಗೆ ಭಾಗದಲ್ಲಿ ತೀವ್ರ ಗಾಯಗಾಳಾಗಿವೆ.

ಆ್ಯಸಿಡ್​ ದಾಳಿಗೆ ತುತ್ತಾಗಿ ನರಳುತ್ತಿರವ ಮಹಿಳೆ
ಈಕೆಯ ನರಳಾಟ ಕೇಳಿದ ಸ್ಥಳೀಯರು ನೀರು ಸಿಂಪಡಿಸಿ, ಚಿಕಿತ್ಸೆಗಾಗಿ ಆ್ಯಂಬುಲೆನ್ಸ್​ನಲ್ಲಿ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಈ ಸಂಬಂಧ ರಾಯಬಾಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಾಗಿ ಶೋಧ ಕಾರ್ಯ ಮುಂದುವರೆದಿದೆ.


Spread the love

About fast9admin

Check Also

ನಿವೃತ್ತ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನಿರ್ದೇಶಕ ಬಿ , ಎ, ವಂಟಮೂರಿಗೆ ಪತ್ನಿ ವಿಯೋಗ

Spread the loveನಿವೃತ್ತ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನಿರ್ದೇಶಕ ಬಿ , ಎ, ವಂಟಮೂರಿಗೆ ಪತ್ನಿ ವಿಯೋಗ …

Leave a Reply

Your email address will not be published. Required fields are marked *