Breaking News

ಗೋಕಾಕ ಬಿಜೆಪಿ ಮಹಿಳಾ ಪದಾದಿಕಾರಿಗಳಿಂದ ಸುಕನ್ಯಾ ಸಮೃದ್ದಿ ಯೋಜನೆ: ಕಾರ್ಮಿಕ ದುರೀಣ ಶ್ರೀ ಅಂಬಿರಾವ ಪಾಟೀಲ ಇವರಿಂದ ಪಾಸ ಬುಕ್ ವಿತರಣೆ.

Spread the love

*ಗೋಕಾಕ ಬಿಜೆಪಿ ಮಹಿಳಾ ಪದಾದಿಕಾರಿಗಳಿಂದ ಸುಕನ್ಯಾ ಸಮೃದ್ದಿ ಯೋಜನೆ: ಕಾರ್ಮಿಕ ದುರೀಣ ಶ್ರೀ ಅಂಬಿರಾವ ಪಾಟೀಲ ಇವರಿಂದ ಪಾಸ ಬುಕ್ ವಿತರಣೆ.

ಪ್ರದಾನ ಮಂತ್ರಿ ನರೇಂದ್ರ ಮೋದಿಯವರ ಕನಸು ಬೇಟಿ ಪಡಾವೋ ಬೇಟಿ ಬಚಾವೋ ಯೋಜನೆಯ ಸುಕನ್ಯಾ ಸಮೃದ್ದಿ ಯೋಜನೆಯಲ್ಲಿ ಮಾಡಿದ ಬ್ಯಾಂಕ ಪಾಸ ಬುಕಗಳನ್ನು ಗೋಕಾಕದಲ್ಲಿನ ಜಲಸಂಪನ್ಮೂಲ‌ ಸಚಿವ ಶ್ರೀ ರಮೇಶ ಜಾರಕಿಹೋಳಿಯವರ ಗೃಹ ಕಚೇರಿಯಲ್ಲಿ ಕಾರ್ಮಿಕ ದುರಿಣ ಅಂಬಿರಾವ ಪಾಟೀಲ ಇವರು ಪಲಾನುಭವಿಗಳಿಗೆ ವಿತರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿಯ ಮಹಿಳಾ ನಗರ ಘಟಕದ ಮಹಿಳಾ ಅದ್ಯಕ್ಷೆ ರಾಜೇಶ್ವರಿ ಒಡೆಯರ ಇವರು ಬಿಜೆಪಿಯಿಂದ ಹೆಣ್ಣಮಕ್ಕಳಿಗಾಗಿ ತಂದ ಬಾಗ್ಯಲಕ್ಷ್ಮಿ, ಬೇಟಿ ಪಡಾವ ಬೇಟಿ ಬಚಾವ ಯೊಜನೆಯಂತೆ ಈಗ ನಿರ್ಗತಿಕ ಹೆಣ್ಣು ಮಕ್ಕಳಿಗೆ ಮುಂದೆ ಬವಿಷ್ಯದಲ್ಲಿ ಉಪಯೋಗವಾಗಲೆಂದು ಸುಕನ್ಯಾ ಸಮೃದ್ದಿ ಯೋಜನೆ ತಂದಿದೆ, ಆದರೆ ಅವರ ಹತ್ತಿರ ತುಂಬಲಿಕ್ಕೆ ಹಣ ಇಲ್ಲದ ಕಾರಣ ಇವತ್ತು

ಕರ್ನಾಟಕ ಸರಕಾರ ನಡೆಸುವಲ್ಲಿ ಬೆನ್ನೆಲುಬಾಗಿ ನಿಂತಿರುವ ರಮೇಶ ಜಾರಕಿಹೋಳಿ ಕ್ಷೇತ್ರದ ಹೆಣ್ಣುಮಕ್ಕಳಾದ ನಾವುಗಳು ಕಡಿಮೆ ಇಲ್ಲ ಎಂದು ತೋರಿಸಿವುದಕ್ಕೆ ಅವರ ಮಾರ್ಗದರ್ಶನ ಮತ್ತು ಕಾರ್ಮಿಕ ದುರೀಣ ಅಂಬೀರಾವ ಪಾಟೀಲ ಇವರ ಸಹಕಾರದ ಜೊತೆ ಕೆಲವು ದಾನಿಗಳ ಸಹಾಯ ಮತ್ತು ಗೋಕಾಕ ತಾಲೂಕಿನ ಬಿಜೆಪಿಯ ಎಲ್ಲ ಮಹಿಳಾ ಪದಾದಿಕಾರಿಗಳು ತಲಾ ಒಂದು ಸಾವಿರ ರೂ, ತುಂಬಿ 101 ಮಕ್ಕಳ ಹೆಸರಲ್ಲಿ ಸುಕನ್ಯಾ ಸಮೃದ್ದಿ ಯೊಜನೆ ಮಾಡಿಸಿದ್ದೇವೆ,
ಇದರಿಂದ ಮುಂದೆ ಆ ಹೆಣ್ಣು ಮಕ್ಕಳ ಉಜ್ವಲವಾಗಲಿದೆ

ಇದರ ಜೊತೆಯಲ್ಲಿ ಕರ್ನಾಟಕದಲ್ಲಿ 101 ಸುಕನ್ಯಾ ಸಮೃದ್ದಿ ಯೋಜನೆ ಮಾಡಿಸಿದವರಲ್ಲಿ ಗೋಕಾಕದ ಬಿಜೆಪಿ ಮಹಿಳಾ ಪದಾದಿಕಾರಿಗಳಿಗೆ ಬಿಜೆಪಿ ರಾಜ್ಯಾದಕ್ಷರಾದ ನಳಿನಕುಮಾರ ಕಟಿಲ್ ಇವರು ಪೊನ‌ ಮುಖಂತರ ಶುಭಾಶಯ ಕೂಡ ತಿಳಿಸಿದ್ದಾರೆಂದರು.

ಈ ಸಮಯದಲ್ಲಿ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೋಳಿ ಮತ್ತು ಕಾರ್ಮಿಕ ದುರೀಣ ಅಂಬಿರಾವ ಪಾಟೀಲ ಇವರ ಬಾವಚಿತ್ರವನ್ನು ರಂಗೋಲಿಯಲ್ಲಿ ಬೀಡಿಸಿದ ಯುವ ಚಿತ್ರಕಲಾ ಪ್ರತಿಷ್ಟಾನದ ಶಿವಾನಂದ ಕೊಕರಿ ಇವರಿಗೆ ಸತ್ಕರಿಸಿ ಸನ್ಮಾನಿಸಲಯಿತು.ಈ ಸಂದರ್ಭದಲ್ಲಿ ಮಹಿಳಾ ಪ್ರದಾನ ಕಾರ್ಯದರ್ಶಿ ಜ್ಯೋತಿ ಕೊಲ್ಹಾರ,ಬಿಜೆಪಿ ಹಿರಿಯ ಮಹಿಳಾ ಮುಖಂಡೆ ಶ್ರೀದೇವಿ, ತಡಕೋರ, ಯುವ ಮೊರ್ಚಾ ಅದ್ಯಕ್ಷ ಮಂಜುನಾಥ ಪ್ರಭುನಟ್ಟಿ ಹಾಗೂ ಇನ್ನೂಳಿದ ಪದಾದಿಕಾರಿಗಳು ಉಪಸ್ಥಿತರಿದ್ದರು.


Spread the love

About fast9admin

Check Also

ನನ್ನ ಕ್ಷೇತ್ರದ ಜನರೇ ನನ್ನ ದೇವರು” ಎಂದ ಶಾಸಕ‌ ಬಾಲಚಂದ್ರ ಜಾರಕಿಹೊಳಿ.

Spread the love“ನನ್ನ ಕ್ಷೇತ್ರದ ಜನರೇ ನನ್ನ ದೇವರು” ಎಂದ ಶಾಸಕ‌ ಬಾಲಚಂದ್ರ ಜಾರಕಿಹೊಳಿ. *ವಿಜಯ ಸಂಕಲ್ಪ ಯಾತ್ರೆಗೆ ಅದ್ದೂರಿ …

Leave a Reply

Your email address will not be published. Required fields are marked *