ಮಗಳ ಮೃತದೇಹ ಬೈಕ್‌ನಲ್ಲಿ ಸಾಗಿಸಿದ ತಂದೆ!
ಪಶ್ಚಿಮ ಬಂಗಾಲದಲ್ಲಿ ಮಗುವಿನ ಮೃತದೇಹವನ್ನು 200 ಕಿಮೀ. ಬಸ್‌ನಲ್ಲಿಯೇ ಸಾಗಿಸಿದ ಅಮಾನವೀಯ ಘಟನೆ ನಡೆದ ಬೆನ್ನಲ್ಲೇ ಮಧ್ಯಪ್ರದೇಶದಲ್ಲಿ ಅಂಥದ್ದೇ
ಹೃದಯವಿದ್ರಾವಕ ಪ್ರಕರಣ ಬೆಳಕಿಗೆ ಬಂದಿದೆ.
ಇಲ್ಲಿನ ಕೋಟಾ ಗ್ರಾಮದ ನಿವಾಸಿ ಲಕ್ಷ್ಮಣ್ ಸಿಂಗ್ ಅನಾರೋಗ್ಯದಿಂದ ಸಾವನ್ನಪ್ಪಿದ ಮಗಳು ಮಾಧುರಿ(13) ಶವವನ್ನು ಆಂಬ್ಯುಲೆನ್ಸ್ ಸಿಗದೆ 70ಕಿಮೀ ಬೈಕ್‌ನಲ್ಲೇ ಸಾಗಿಸಿದ್ದಾರೆ. ಖಾಸಗಿ ಆ್ಯಂಬ್ಯುಲೆನ್ಸ್‌ಗೆ ತಮ್ಮ
ಬಳಿ ಹಣವಿಲ್ಲದ ಕಾರಣ ಮೃತದೇಹವನ್ನು ಬೈಕ್‌ನಲ್ಲಿ ಕೊಂಡೊಯ್ದಿರುವುದಾಗಿ ಹೇಳಿದ್ದಾರೆ.