ಪರಿಸರದಿಂದಲೆ ಮನಕುಲ ಬದುಕುತ್ತಲಿದೆ: ವಿಜಯ ಕೆಂಗನ್ನವರ
ಪರಿಸರ ದಿನದಂದು ಮಾತ್ರ ಸಸಿಗಳನ್ನು ನೆಡದೆ ಅದರ ಪಾಲನೆ ಮಾಡುವ ಕರ್ತವ್ಯ ವಿದ್ಯಾರ್ಥಿಗಳು ಮಾಡಬೇಕೆಂದು ಗೋಕಾಕ ತಾಲೂಕಿನ ಕೊಣ್ಣೂರಿನ ಶ್ರೀತಪೋವನ ಆಚಾರ್ಯ ಶಾಂತಿಸಾಗರ ಶಾಲೆಯಲ್ಲಿ ಪರಿಸರ ದಿನಾಚರಣೆ ನಿಮಿತ್ಯ ಸಸಿ ನೆಟ್ಟು ವಿದ್ಯಾರ್ಥಿ ವಿಜಯ ಮಾತನಾಡಿದರು
ಅದಷ್ಟೆ ಅಲ್ಲದೆ ಇವತ್ತು ಮರ,ಗಿಡಗಳು ಇರುವದರಿಂದಲೆ ಮನುಷ್ಯ ಕುಲ ಬದುಕುತಿದೆ ಆದರೆ ಮನುಷ್ಯರಾದವರು ಮರಗಳ ಮಾರಣ ಹೋಮ ಮಾಡುತಿದ್ದಾರೆ, ಅದು ನಿಲ್ಲಬೇಕು,ಇವತ್ತು ನಾವುಗಳು ಒಂದು ಮರವನ್ನಾದರೂ ಬೆಳೆಸುವ ಕಾರ್ಯಮಾಡಬೇಕಾಗಿದೆ ಆವಾಗಲೆ ಮನುಷ್ಯಕುಲಕ್ಕೆ ಒಳ್ಲಕೆಯದಾಗುತ್ತದೆ, ಮರಗಳು ಇರುವದರಿಂದಲೆ ನಮಗೆ ಒಳ್ಳೆಯ ಗಾಳಿ ವಾತಾವರಣ ಸಿಗುತ್ತಲಿದೆ ಎಂದರು,
ಇನ್ನೂ ಈ ಶಾಲೆಯಲ್ಲಿ ಪ್ರತಿ ವರ್ಗದ ವಿದ್ಯಾರ್ಥಿಗಳು ತಮ್ಮ ತಮ್ಮ ವರ್ಗದ ಶಿಕ್ಷಕಿಯರ ಜೊತೆ ಖುಷಿಯಾಗಿ ಸಸಿ ನೆಡುವಾಗ ಮಕ್ಕಳ ಮೂಖದಲ್ಲಿ ಮಂದಹಾಸ ಎದ್ದು ಕಾಣುತಿತ್ತು.
ಅದರಂತೆ ಶಿಕ್ಷಕಿಯರು ಕೂಡ ಮಕ್ಕಳಲ್ಲಿ ಪರಿಸರ ಉಳಿಸುವ,ಬೆಳೆಸುವ ಬಗ್ಗೆ ಆಸಕ್ತಿ ಹುಟ್ಟಲಿ ಎಂಬ ಭಾವನೆಯಿಂದ ಮಕ್ಕಳಿಂದಲೆ ಸಸಿ ನೆಡಸಿದರು,ಇದರಿಂದ ಮಕ್ಕಳು ಕೂಡ ಸಂತೋಷಗೊಂಡರು, ಈ ಸಂದರ್ಭದಲ್ಲಿ ಶಾಲೆಯ ಚೆರಮನ್ನರಾದ ಜಿನ್ನಪ್ಪ ಚೌಗಲಾ, ಮುಖ್ಯ ಶಿಕ್ಷಕಿ ಸುದಾ ಪೂಜೇರಿ, ಮಹೇಶ್ವರಿ ಸಿದ್ದನ್ನವರ, ಸುರೇಖಾ ವಗ್ಗನವರ,ಸಾವಿತ್ರಿ ಚೌಗಲಾ, ರೇಖಾ ಪೂಜೇರಿ,ಗೀತಾ ಹಲಗಿ, ಶೋಬಾ ಗುಡದವರ, ಸವಿತಾ ಪೂಜೇರಿ, ಚಂದ್ರವ್ವಾ ಸುಕುಂಡೆ, ವಿಜಯಲಕ್ಷ್ಮಿ ಬಾನಿ ಹಾಗೂ ಭಾರತಿ ಅಂಬಿಗೇರ ಉಪಸ್ಥಿತರಿದ್ದರು