Breaking News

ಅರಭಾವಿ ದುರದುಂಡೀಶ್ವರ ಪುಣ್ಯಾರಣ್ಯ ಮಠದ ಪೀಠಾಧಿಪತಿಯಾಗಿ ಗುರುಬಸವಲಿಂಗ ಮಹಾಸ್ವಾಮಿಗಳ ಪೀಠಾರೋಹಣ*

Spread the love

*ಅರಭಾವಿ ದುರದುಂಡೀಶ್ವರ ಪುಣ್ಯಾರಣ್ಯ ಮಠದ ಪೀಠಾಧಿಪತಿಯಾಗಿ ಗುರುಬಸವಲಿಂಗ ಮಹಾಸ್ವಾಮಿಗಳ ಪೀಠಾರೋಹಣ*

*ಶ್ರೀಮಠದ ಅಭಿವೃದ್ಧಿಗೆ ಲಿಂ. ಸಿದ್ಧಲಿಂಗ ಮಹಾಸ್ವಾಮಿಗಳ ಕನಸಿನಂತೆ ಗುರುಬಸವಲಿಂಗ ಮಹಾಸ್ವಾಮಿಗಳು ಶ್ರಮಿಸಲಿ : ನಿಡಸೋಶಿ ಶ್ರೀಗಳು*

*ಮೂಡಲಗಿ* : ದುರದುಂಡೀಶ್ವರರ ಆಶೀರ್ವಾದ ಫಲವಾಗಿ ಅರಭಾವಿ ದುರದುಂಡೀಶ್ವರ ಪುಣ್ಯಾರಣ್ಯ ಮಠವು ಧಾರ್ಮಿಕವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಬೆಳೆದಿದ್ದು, ಹಿಂದಿನ ಪೀಠಾಧಿಪತಿಯಾಗಿದ್ದ ಲಿಂ. ಸಿದ್ಧಲಿಂಗ ಮಹಾಸ್ವಾಮಿಗಳ ಕನಸಿನಂತೆ ಶ್ರೀಮಠದ ಅಭಿವೃದ್ಧಿಗಾಗಿ ಮಠದ ನೂತನ ಪೀಠಾಧಿಪತಿಯಾಗಿ ಪೀಠಾರೋಹಣಗೈದಿರುವ ಗುರುಬಸವಲಿಂಗ ಮಹಾಸ್ವಾಮಿಗಳು ಶ್ರಮಿಸಲಿ. ಶ್ರೀಮಠವು ಹೊಸ ಆಯಾಮದತ್ತ ಮುನ್ನಡೆಯಲಿ ಎಂದು ನಿಡಸೋಶಿ ಸಿದ್ಧಸಂಸ್ಥಾನ ಮಠದ ಜಗದ್ಗುರು ಪಂಚಮ ಶಿವಲಿಂಗೇಶ್ವರ ಮಹಾಸ್ವಾಮಿಗಳು ಆಶಿಸಿದರು.
ಸೋಮವಾರದಂದು ಜಗದ್ಗುರು ದುರದುಂಡೀಶ್ವರ ಸಿದ್ಧಸಂಸ್ಥಾನ ಅರಭಾವಿ ಮಠದಲ್ಲಿ ಜರುಗಿದ ಗುರುಬಸವಲಿಂಗ ಮಹಾಸ್ವಾಮಿಗಳವರ ಪೀಠಾರೋಹಣ ಸಮಾರಂಭದ ದಿವ್ಯ ಸಾನಿಧ್ಯವಹಿಸಿ ಆಶೀರ್ವಚನ ನೀಡಿದ ಅವರು, ದುರದುಂಡೀಶ್ವರ ಮಠ ಮತ್ತು ನಿಡಸೋಶಿ ಮಠಗಳಿಗೆ ತಮ್ಮದೆಯಾದ ಹಲವು ಇತಿಹಾಸಗಳಿವೆ ಎಂದು ಹೇಳಿದರು.
ಲಿಂ. ಸಿದ್ಧಲಿಂಗ ಮಹಾಸ್ವಾಮಿಗಳು ಶ್ರೀಮಠದ ಪ್ರಗತಿಗಾಗಿ ಕಳೆದ ನಾಲ್ಕೈದು ದಶಕದಿಂದ ಅವಿರತವಾಗಿ ಶ್ರಮಿಸಿದ್ದರು. ಸರಳ, ಶಿಸ್ತಿನ ವ್ಯಕ್ತಿಯಾಗಿದ್ದ ಅವರು ಕಳೆದ ತಿಂಗಳಲ್ಲಿ ಲಿಂಗೈಕ್ಯರಾದರು. ಅವರು ಬಿಟ್ಟು ಹೋದ ಆಚಾರ, ವಿಚಾರ ಹಾಗೂ ಸಂಸ್ಕøತಿಗಳನ್ನು ಈಗಿರುವ ಹೊಸ ಪೀಠಾಧಿಪತಿಗಳು ಅಳವಡಿಸಿಕೊಂಡು ಶ್ರೀಮಠವನ್ನು ಯಶಸ್ವಿಯಾಗಿ ಮುನ್ನಡೆಸಿಕೊಂಡು ಹೋಗಬೇಕು. ಸಿದ್ಧಲಿಂಗ ಮಹಾಸ್ವಾಮಿಗಳಿಗೆ ನೀಡಿರುವ ತನು, ಮನ, ಧನ ಸೇವೆಯನ್ನು ಗುರುಬಸವಲಿಂಗ ಮಹಾಸ್ವಾಮಿಗಳಿಗೆ ಸಕಲ ಸದ್ಭಕ್ತರು ನೀಡುವ ಮೂಲಕ ಶ್ರೀಮಠದ ಭವ್ಯ ಪರಂಪರೆಗೆ ಮುಂದಾಗಬೇಕು. ಮಠಗಳ ಬೆಳವಣಿಗೆಗಳಲ್ಲಿ ಭಕ್ತರ ಜೊತೆಗೆ ರಾಜಕಾರಣಿಗಳ ಪಾತ್ರವೂ ಕೂಡ ದೊಡ್ಡದಿದೆ. ಮಠಗಳನ್ನು ಉಳಿಸಿ ಬೆಳೆಸುವ ಶಕ್ತಿ ಭಕ್ತರಿಗಿದೆ ಎಂದು ಹೇಳಿದರು.
ಲಿಂ. ಸಿದ್ಧಲಿಂಗ ಮಹಾಸ್ವಾಮಿಗಳ ಸದಿಚ್ಛೆಯಂತೆ ಈ ಭಾಗದ ಜನಪ್ರೀಯ ಶಾಸಕರಾಗಿರುವ ಬಾಲಚಂದ್ರ ಜಾರಕಿಹೊಳಿ ಅವರು ತಮ್ಮ ತಾಯಿ-ತಂದೆಯವರ ಸ್ಮರಣಾರ್ಥವಾಗಿ ಶ್ರೀಮಠದಲ್ಲಿ ಸುಸಜ್ಜಿತವಾದ ಸಭಾ ಭವನವನ್ನು ನಿರ್ಮಿಸಿ ಕೊಟ್ಟಿದ್ದಾರೆ. ಬಾಲಚಂದ್ರ ಜಾರಕಿಹೊಳಿ ಅವರು ಶ್ರೀಮಠದ ಅಭಿವೃದ್ಧಿಯ ಜೊತೆಗೆ ಇಡೀ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಬಾಲಚಂದ್ರ ಅವರಿಗೆ ದುರದುಂಡೀಶ್ವರನು ಸದಾ ಒಳ್ಳೆಯದನ್ನು ಮಾಡಲಿ ಎಂದು ಅವರು ಆಶಿಸಿದರು.
ಗುರುಬಸವಲಿಂಗ ಮಹಾಸ್ವಾಮಿಗಳವರ ಪೀಠಾರೋಹಣಕ್ಕಿಂತ ಮುಂಚೆ ಶ್ರೀಮಠದಲ್ಲಿ ಹನ್ನೊಂದು ದಿನಗಳ ಕಾಲ ಶೂನ್ಯ ಸಂಪಾದನೆ ಪ್ರವಚನವನ್ನು ಹಮ್ಮಿಕೊಂಡು ಭಕ್ತರಿಗೆ ಧಾರ್ಮಿಕ ವಾತಾವರಣವನ್ನು ನಿರ್ಮಿಸಿದ್ದಾರೆ. ಶೂನ್ಯದಿಂದ ಕನ್ನಡ ಅಕ್ಷರದಲ್ಲಿ ಒಂಬತ್ತೂ ಅಕ್ಷರಗಳು ಹುಟ್ಟಿಕೊಳ್ಳುತ್ತಿವೆ. ಶೂನ್ಯದಿಂದ ಅಧಿಕವಾಗಿ ಸಂಪಾದನೆ ಮಾಡುವುದೇ ಶೂನ್ಯ ಸಂಪಾದನೆ ಅನ್ನುತ್ತಾರೆ. ಮಠದ ಭಕ್ತರ ಆಶಯದಂತೆ ಹೊಸ ಪೀಠಾಧಿಪತಿಗಳು ಸೇವೆ ಸಲ್ಲಿಸಲಿ. ಆ ದುರದುಂಡೀಶ್ವರನ ಆಶೀರ್ವಾದ ಗುರುಬಸವಲಿಂಗ ಮಹಾಸ್ವಾಮಿಗಳಿಗೆ ಸದಾ ಇರುತ್ತದೆ ಎಂದು ಆಶಿಸಿದರು.


Spread the love

About Fast9 News

Check Also

ಸಮಾಜದ ಬದಲಾವಣೆಯಲ್ಲಿ ಶಿಕ್ಷಣವೊಂದೇ ಪ್ರಮುಖ ಅಸ್ತ್ರ: ಶಾಸಕ ಬಾಲಚಂದ್ರ ಜಾರಕಿಹೋಳಿ

Spread the loveಸಮಾಜದ ಬದಲಾವಣೆಯಲ್ಲಿ ಶಿಕ್ಷಣವೊಂದೇ ಪ್ರಮುಖ ಅಸ್ತ್ರ: ಶಾಸಕ ಬಾಲಚಂದ್ರ ಜಾರಕಿಹೋಳಿ ಗೋಕಾಕ- ಹಿಂದುಳಿದ ಹಣಬರ ಸಮಾಜವು ಸಾಮಾಜಿಕವಾಗಿ, …

Leave a Reply

Your email address will not be published. Required fields are marked *