Breaking News

ರಕ್ತದಾನ ಮಹಾದಾನ : ಆರ್,ಜಿ,ಬಸ್ಸಾಪುರಿ

Spread the love

ರಕ್ತದಾನ ಮಹಾದಾನ : ಆರ್,ಜಿ,ಬಸ್ಸಾಪುರಿ

ರಕ್ತದ ಕೊರತೆಯಿಂದ ಹಲವರು ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ ಮತ್ತೆ ಅನೇಕರು ಪರದಾಡುವುದನ್ನು ಎಷ್ಟೋ ಸಂದರ್ಭಗಳಲ್ಲಿ ನಾವುಗಳೆಲ್ಲರು ಕಾಣುತ್ತೇವೆ. ರಕ್ತಕ್ಕಾಗಿ ಅಲೆದಾಡುವಾಗ ಮಾತ್ರ ಜನರಿಗೆ ಅದರ ಮಹತ್ವ ತಿಳಿಯುತ್ತದೆ ಎಂದು ಗೋಕಾಕ ತಾಲೂಕಿನ ಆರೋಗ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಆರ್,ಜಿ,ಬಸಾಪುರಿ ಇವರು
ಮಾತನಾಡಿದರು

ಅದಲ್ಲದೆ ರಕ್ತದಾನ ಮಹಾದಾನವಾಗಿದೆ ಕೊಣ್ಣೂರ ಪ್ರಾಥಮಿಕ ಕೇಂದ್ರದಲ್ಲಿ ಶಿಬಿರ ಏರ್ಪಡಿಸಲಾಗಿದೆ, ಸಾವು ಬದುಕಿನ ಮಧ್ಯೆ ಹೋರಾಟ ನಡೆಸುವವರನ್ನು ಬದುಕಿಸಲು ರಕ್ತದಾನ ಮಾಡುವುದು ಸಮಾಜಮುಖಿ ಕಾರ್ಯಗಳಲ್ಲಿ ಒಂದಾಗಿದೆ ಎಂದರು. ಯುವಕರಲ್ಲಿ ರಕ್ತದಾನದ ಮಹತ್ವ ತಿಳಿಸುವುದು ಅತ್ಯವಶಕವಾಗಿದೆ. ಈ ಕುರಿತು ಅರಿವು ಮೂಡಿಸುತ್ತಾ ರಕ್ತ ಸಂಗ್ರಹಿಸಿ ತುರ್ತು ಸಂದರ್ಭಗಳಲ್ಲಿ ಪೂರೈಸುತ್ತಿರುವ ದಾನಿಗಳಿಗೆ ಚಿರಋಣಿಯಾಗಿರಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಕೊಣ್ಣೂರ ಪ್ರಾಥಮಿಕ ಕೇಂದ್ರದ ಸಿಬ್ಬಂದಿಗಳಾದ ಎ,ಎಸ್,ತಹಸಿಲ್ದಾರ, ಡಿ,ಎಚ್,ಶೇಖ್ ,ಎಚ್,ಎಸ್,ಹರೀಶ,ಮಲ್ಲವ್ವ,ನಾಯಕ, ಎಸ್,ಎಚ್, ಜಂಬಗಿ, ಹಾಗೂ ಅಂಗನವಾಡಿ ಕಾರ್ಯಕರ್ತರು ಉಪಸ್ಥಿತರಿದ್ದರು.


Spread the love

About fast9admin

Check Also

ಸಮಾಜದ ಬದಲಾವಣೆಯಲ್ಲಿ ಶಿಕ್ಷಣವೊಂದೇ ಪ್ರಮುಖ ಅಸ್ತ್ರ: ಶಾಸಕ ಬಾಲಚಂದ್ರ ಜಾರಕಿಹೋಳಿ

Spread the loveಸಮಾಜದ ಬದಲಾವಣೆಯಲ್ಲಿ ಶಿಕ್ಷಣವೊಂದೇ ಪ್ರಮುಖ ಅಸ್ತ್ರ: ಶಾಸಕ ಬಾಲಚಂದ್ರ ಜಾರಕಿಹೋಳಿ ಗೋಕಾಕ- ಹಿಂದುಳಿದ ಹಣಬರ ಸಮಾಜವು ಸಾಮಾಜಿಕವಾಗಿ, …

Leave a Reply

Your email address will not be published. Required fields are marked *