Breaking News

ಶಿಂಗಳಾಪುರದಲ್ಲಿರುವ ಮೂಲ ಎಳುಕೊಳ್ಳದ ಯಲ್ಲಮ್ಮದೇವಿಯ ಜಾತ್ರೆ ನಾಳೆಯಿಂದ ಪ್ರಾರಂಬ

Spread the love

ಶಿಂಗಳಾಪುರದಲ್ಲಿರುವ ಮೂಲ ಎಳುಕೊಳ್ಳದ ಯಲ್ಲಮ್ಮದೇವಿಯ ಜಾತ್ರೆ ನಾಳೆಯಿಂದ ಪ್ರಾರಂಬ

ಹೌದು ಎಲ್ಲರೂ ತಿಳಿದಿರುವ ಹಾಗೆ ಜಗನ್ಮಾಥೆ ಶ್ರೀ ರೇಣುಕಾ ದೇವಿ (ಯಲ್ಲಮ್ಮಾ) ದೇವಿಯೂ ಸವದತ್ತಿಯಲ್ಲಿ ನೆಲಿಸಿರುವ ಬಗ್ಗೆ ಮಾತ್ರ ಗೊತ್ತು ಆದರೆ ಮೂಲತಹ ತಾಯಿ ರೇಣುಕಾ ದೇವಿಯು ಗೋಕಾಕ ತಾಲೂಕಿನ‌ ಸಿಂಗಳಾಪುರ ಹತ್ತಿರವಿರುವ ಪ್ರಭಾ ಸುಗರ ಪಕ್ಕದಲ್ಲಿರುವ ಗುಡ್ಡದಲ್ಲಿ ದೇವಿಯು ನೆಲೆಸಿದ್ದಳು, ಆಗ ಇಲ್ಲಿ ಸ್ಥಳದ ಅಭಾವವಿರುವದರಿಂದ ಇಲ್ಲಿ ಒಂದೆ ಹೆಜ್ಜೆ ಇಟ್ಟು ಇನ್ನೊಂದು ಹೆಜ್ಜೆಯನ್ನು ಸವದತ್ತಿಯಲ್ಲಿ ಇಟ್ಟಿದ್ದರಿಂದ ಅಲ್ಲಿಯೆ ನೆಲೆಸಿದ್ದಾಳೆಂದು ಶಿಂಗಳಾಪುರದಲ್ಲಿರುವ ಯಲ್ಲಮ್ಮ ದೇವಸ್ಥಾನದ ಕಮಿಟಿಯವರು ಹೇಳಿದ್ದಾರೆ, ಆದರಂತೆ ಇನ್ನೂ ಇಲ್ಲಿನ ಇತಿಹಾಸ ತಿಳಿದವರು ಮೊದಲು ಇಲ್ಲಿಗೆ ಬಂದು ಇಲ್ಲಿನ ದೇವಿಯ ಆಶಿರ್ವಾದ ಪಡೆದು ನಂತರ ಸವದತ್ತಿಯಲ್ಲಿ ನೆಲೆಸಿರುವ ಯಲ್ಲಮ್ಮ ದೇವಿಯ ಕಡೆ ಪಯನ ಬೆಳೆಸುತ್ತಾರೆನ್ನುತ್ತಾರೆ ಇಲ್ಲಿನ ಜನ, ಈ ದೇವಸ್ಥಾನದ ಸುತ್ತಮುತ್ತಲೂ ಗುಡ್ಡಗಾಡಗಳಿಂದ ತುಂಬಿ ಇಲ್ಲಿಯೂ ಪ್ರತಿದಿನವೂ ಹರಿಯುವ ನೀರಿನೊಂದಿಗೆ ಜೊಗುಳ ಬಾಂವಿ ಇದೆ,ಎಳುಕೊಳ್ಳವಿದೆ, ಪರಶುರಾಮ ಮಂದಿರ ಇದೆ ಅದಕ್ಕಾಗಿ ಇಲ್ಲಿ ಕೆವಲ ಕರ್ನಾಟಕವಷ್ಟೆ ಅಲ್ಲ ಮಹಾರಾಷ್ಟ್ರದಿಂದಲೂ ಬಕ್ತರು ಬಂದು ತಮ್ಮ ಇಷ್ಟಾರ್ಥಗಳನ್ನು ಬೇಡಿಕೊಳ್ಳುತ್ತಾರೆ,

ಅಷ್ಟೆ ಯಾಕೆ ಇಲ್ಲಿ ಯಾರೆ ಬಕ್ತರು ದೇವಿಯಲ್ಲಿ ಬೇಡಿಕೊಂಡಿದ್ದು ಒಂದು ವರ್ಷ ಪೊರೈಸುವದರೊಳಗೆ ಇಡೆರಿದೆ ಎಂದು ಬಕ್ತರು ತಮ್ಮ ಸ್ವಂತ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ,ಅದರಂತೆ ಮತ್ಯಾಕೆ ತಡ ನಾಳೆಯಿಂದಲೆ ತಾಯಿ ಜಗನ್ಮಾತೆ ಎಳುಕೊಳ್ಳ ಯಲ್ಲಮ್ಮ ದೇವಿಯ ಜಾತ್ರೆ ಪ್ರಾರಂಬವಾಗಲಿದೆ,


Spread the love

About fast9admin

Check Also

ಬಣಜಿಗರ ಕ್ಷೇಮಾಭಿವೃದ್ಧಿ ಸಂಘದ ನೂತನ ಅಧ್ಯಕ್ಷ ಚನ್ನಪ್ಪ ಕೌಜಲಗಿ, ಮಹಿಳಾ ಘಟಕ ಅಧ್ಯಕ್ಷೆ ಮಹಾದೇವಿ ಉಪ್ಪಿನ ಸರ್ವಾನುಮತದ ಆಯ್ಕೆ

Spread the loveಬಣಜಿಗರ ಕ್ಷೇಮಾಭಿವೃದ್ಧಿ ಸಂಘದ ನೂತನ ಅಧ್ಯಕ್ಷ ಚನ್ನಪ್ಪ ಕೌಜಲಗಿ, ಮಹಿಳಾ ಘಟಕ ಅಧ್ಯಕ್ಷೆ ಮಹಾದೇವಿ ಉಪ್ಪಿನ ಸರ್ವಾನುಮತದ …

Leave a Reply

Your email address will not be published. Required fields are marked *