Breaking News

ಸಿಎಂ ಭೇಟಿ ಫಿಕ್ಸ್** ಸಂಗೊಳ್ಳಿ ರಾಯಣ್ಣ ಕಂಚಿನ ಪುತ್ಥಳಿ ಅನಾವರಣ ಕಾರ್ಯಕ್ರಮ*

Spread the love

*ಸಿಎಂ ಭೇಟಿ ಫಿಕ್ಸ್** ಸಂಗೊಳ್ಳಿ ರಾಯಣ್ಣ ಕಂಚಿನ ಪುತ್ಥಳಿ ಅನಾವರಣ ಕಾರ್ಯಕ್ರಮ*

*ಮುಖ್ಯಮಂತ್ರಿ ಸಿದ್ಧರಾಮಯ್ಯ ೨೬ ರಂದು ಕಳ್ಳಿಗುದ್ದಿ, ಕೌಜಲಗಿ, ಯಾದವಾಡ ಮತ್ತು ಕಲ್ಲೊಳಿಗೆ ಆಗಮನ.*

*ಸಿಎಂ ಸಿದ್ಧರಾಮಯ್ಯ ಆಗಮನದ ಹಿನ್ನೆಲೆಯಲ್ಲಿ ಕೌಜಲಗಿಯಲ್ಲಿ ಭರದ ಸಿದ್ಧತೆ.*
*ಗೋಕಾಕ*- ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಬರುವ ಸೋಮವಾರದಂದು ಗೋಕಾಕ ಮತ್ತು ಮೂಡಲಗಿ ತಾಲ್ಲೂಕು ಪ್ರವಾಸ ಕೈಗೊಂಡಿದ್ದು, ನೂತನವಾಗಿ ನಿರ್ಮಾಣಗೊಂಡಿರುವ ಸಂಗೊಳ್ಳಿ ರಾಯಣ್ಣನ ಪುತ್ಥಳಿ ಅನಾವರಣ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ಸೋಮವಾರದಂದು ಬೆಂಗಳೂರಿನಿAದ ವಿಶೇಷ ವಿಮಾಣದ ಮೂಲಕ ಮ.೧೨.೧೫ ಗಂಟೆಗೆ ಬೆಳಗಾವಿಗೆ ಆಗಮಿಸಲಿರುವ ಮುಖ್ಯಮಂತ್ರಿಗಳು ರಸ್ತೆಯ ಮೂಲಕ ಗೋಕಾಕ ತಾಲ್ಲೂಕಿನ ಕಳ್ಳಿಗುದ್ದಿ, ಕೌಜಲಗಿ, ಮೂಡಲಗಿ ತಾಲ್ಲೂಕಿನ ಯಾದವಾಡ ಮತ್ತು ಕಲ್ಲೊಳ್ಳಿ ಪಟ್ಟಣದಲ್ಲಿ ನಡೆಯಲಿರುವ ಕಾರ್ಯಕ್ರಮಗಳಲ್ಲಿ ಅವರು ಭಾಗವಹಿಸುವರು.
ಕೌಜಲಗಿಯಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಕೋಟೆ ಮತ್ತು ಕಂಚಿನ ಪುತ್ಥಳಿಯನ್ನು ಮುಖ್ಯಮಂತ್ರಿ
ಸಿದ್ಧರಾಮಯ್ಯನವರು ಉದ್ಘಾಟಿಸಿ, ಹೊರ ವಲಯದಲ್ಲಿರುವ ದಿ. ವಾಯ್.ಎಲ್. ಸಣ್ಣಕ್ಕಿ ಆಂಗ್ಲ ಮಾಧ್ಯಮ
ಶಾಲೆಯ ಅತಿಥಿ ಗೃಹದಲ್ಲಿ ಮಧ್ಯಾಹ್ನದ ಭೋಜನವನ್ನು ಸ್ವೀಕರಿಸುವರು. ನಂತರ ಯಾದವಾಡಕ್ಕೆ ಪ್ರಯಾಣ ಬೆಳೆಸುವರು. ಮುಖ್ಯಮಂತ್ರಿ ಸಿದ್ಧರಾಮಯ್ಯನವರೊಂದಿಗೆ ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ, ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ ಅವರು ಆಗಮಿಸಲಿದ್ದಾರೆ. ಅರಭಾವಿ ಶಾಸಕ ಹಾಗೂ ಬೆಮ್ಯುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಈ ಕಾರ್ಯಕ್ರಮಗಳ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ ಎಂದು ಸಂಗೊಳ್ಳಿ ರಾಯಣ್ಣ ಪುತ್ಥಳಿ ಅನಾವರಣ ಕಾರ್ಯಕ್ರಮದ ಸ್ವಾಗತ ಸಮಿತಿ ಅಧ್ಯಕ್ಷ ಹಾಗೂ ರಾಜ್ಯ ಕುರುಬರ ಸಂಘದ ಮಾಜಿ ಅಧ್ಯಕ್ಷ ರಾಜೇಂದ್ರ ಸಣ್ಣಕ್ಕಿ ತಿಳಿಸಿದ್ದಾರೆ.


Spread the love

About Fast9 News

Check Also

ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರ ಮೂಲಕ ಅಭಿವೃದ್ಧಿಗೆ ಹಣ ಕೇಳುತ್ತೇನೆ.: ಶಾಸಕ ಬಾಲಚಂದ್ರ ಜಾರಕಿಹೋಳಿ

Spread the loveಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರ ಮೂಲಕ ಅಭಿವೃದ್ಧಿಗೆ ಹಣ ಕೇಳುತ್ತೇನೆ.: ಶಾಸಕ ಬಾಲಚಂದ್ರ ಜಾರಕಿಹೋಳಿ …

Leave a Reply

Your email address will not be published. Required fields are marked *