Breaking News

ಶಾಂತಿಯುತವಾಗಿ ಜಾತ್ರೆ,ಹಬ್ಬ ಆಚರಿಸಿದಾಗ ಮಾತ್ರ ಸಹಭಾಳ್ವೆ ಸಾಧ್ಯ :ಪಿ,ಎಸ್,ಐ,ಶರಣಬಸಪ್ಪ ಸಂಗಳದ.

Spread the love

ಶಾಂತಿಯುತವಾಗಿ ಜಾತ್ರೆ,ಹಬ್ಬ ಆಚರಿಸಿದಾಗ ಮಾತ್ರ ಸಹಭಾಳ್ವೆ ಸಾಧ್ಯ :ಪಿ,ಎಸ್,ಐ,ಶರಣಬಸಪ್ಪ ಸಂಗಳದ.

ಗೋಕಾಕ : ಪರಸ್ಥಳಗಳಿಂದ ಬಂದಂತಹ ಬಿಗರು,
ಸಂಬಂಧಿಕರು ಹತ್ತು ಜನರಿಗೆ ಜಾತ್ರೆಯ ಬಗ್ಗೆ ಹೆಮ್ಮೆಯಿಂದ ಹೇಳಬೇಕಾದರೆ ತಾವೆಲ್ಲರೂ ಯಾವುದೆ ಅಹಿತಕರ ಘಟನೆಗಳಿಗೆ ಆಸ್ಪದ ನೀಡದೆ ಅದ್ದೂರಿಯಾಗಿ ಆದಿಶಕ್ತಿ ಶ್ರೀ ದುರ್ಗಾದೇವಿ ಜಾತ್ರೆಯನ್ನು ಎಲ್ಲರೂ ಸ್ವಾಭಿಮಾನದಿಂದ ಮಾಡಿದಾಗ ಮಾತ್ರ ಸಾದ್ಯ ಎಂದು ಗೋಕಾಕ ತಾಲೂಕಿನ ಕೊಣ್ಣೂರಿನ ಅಂಬೇಡ್ಕರ ನಗರದಲ್ಲಿರುವ ಶ್ರೀ ದುರ್ಗಾದೇವಿ ದೇವಸ್ಥಾನದಲ್ಲಿ ಜಾತ್ರೆ ಮತ್ತು ಬಕ್ರಿದ್ ಹಬ್ಬದ ನಿಮಿತ್ಯ ಹಮ್ಮಿಕೊಂಡ ಶಾಂತಿಸಭೆಯಲ್ಲಿ ಗೋಕಾಕ ಗ್ರಾಮೀಣ ಪಿ,ಎಸ್,ಐ, ಶರಣಬಸಪ್ಪ ಸಂಗಳದ ಇವರು ಮಾತನಾಡಿದರು.

ಕೊಣ್ಣೂರ ಗ್ರಾಮದಲ್ಲಿ ಜೂನ 13 ರಿಂದ15 ವರೆಗೆ ಮೂರು ದಿನಗಳ ಕಾಲ ಜರುಗುವ ಆದಿಶಕ್ತಿ ದುರ್ಗಾದೇವಿಯ ಜಾತ್ರೆಯನ್ನು ಎಲ್ಲರೂ ಭಕ್ತಿ ಭಾವದಿಂದ ಆಚರಿಸಬೇಕು.ಯಾಕೆಂದರೆ ಐದು ವರ್ಷಕ್ಕೊಮ್ಮೆ ನಡೆಯುವ ಜಾತ್ರೆಗೆ ಪರಸ್ಥಳಗಳಿಂದ ಸಂಬಂದಿಕರು ಜಾತ್ರೆಯನ್ನು ಸಂಭ್ರಮಿಸಲು ಬಂದಿರುತ್ತಾರೆ,ಅಂತಹ ಸಂದರ್ಭದಲ್ಲಿ ತಾವುಗಳು ಅಹಿತಕರ ಘಟನೆ ಮಾಡಿ ಪೋಲಿಸರ ಅತಿಥಿಗಳಾದರೆ ಜಾತ್ರೆಯನ್ನು ಆಚರಿಸಲಾಗದೆ ಪೋಲಿಸ್ ಠಾಣೆಗೆ ಅಲೆದಾಡುವ ಪರಿಸ್ಥಿತಿ ಉಂಟು ಮಾಡಿಕೊಳ್ಳಬೇಡಿ,ತಾವೆಲ್ಲರೂ ಅದ್ದೂರಿಯಾಗಿ ಸಂಭ್ರಮದಿಂದ ಜಾತ್ರೆ ಆಚರಿಸಲು ಹಣ ಕೂಡಿಸಿದ್ದಿರಿ ಅದಕ್ಕಾಗಿ ಎಲ್ಲರೂ ಭಕ್ತಿ ಭಾವದಿಂದ ಆಚರಿಸಿದರೆ ನಮಗೂ ಸಂತೋಷ ಪ್ರತಿಯೊಬ್ಬರಿಗೂ ಸಂತೋಷ ಎಂದರು. ಒಂದು ವೇಳೆ ಜಾತ್ರೆಯಲ್ಲಿ ಅಸಭ್ಯವಾಗಿ ನಡೆದುಕೊಳ್ಳುವುದು, ಶಾಂತಿ‌ ಭಂಗ ಮಾಡಿದರೆ,ಯಾವುದೆ ಅಹಿತಕರ ಘಟನೆ ಮಾಡಿದ್ದಲ್ಲಿ ನಿರ್ದಾಕ್ಷಿಣ್ಯವಾಗಿ ಅಂತವರ ಕಾನೂನು ಕ್ರಮ ಕೈಗೋಳ್ಳಲಾಗುವುದು,ಒಂದು ವೇಳೆ ಸಣ್ಣ ಪುಟ್ಟ ಘಟನೆ ಆದಲ್ಲಿ ಹಿರಿಯರು ತಮ್ಮಲ್ಲಿಯೆ ಬಗೆಹರಿಸಿಕೊಳ್ಳಬೇಕೆಂದು ತಿಳಿಸಿದರು.

ಇನ್ನು ಮುಸ್ಲಿಂ ಸಮಾಜದ ಮುತವಲಿಯಾದ ಪರವೇಜ ನಾಯಕ ಮಾತನಾಡಿ ಶ್ರೀ ದುರ್ಗಾದೇವಿ ಜಾತ್ರೆಯ ಮೆರವಣಿಗೆ ಸಂದರ್ಭದಲ್ಲಿ ಅನ್ಯರಿಗೆ ಒತ್ತಾಯ ಪೂರ್ವಕ ಬಂಡಾರ ಎರಚಬೇಡಿ,ತಮ್ಮತಮ್ಮಲಿನ ವೈಮನಸ್ಸನ್ನು ಮರೆತು ಜಾತ್ರೆಯನ್ನು ಎಲ್ಲರೂ ಕೂಡಿ ಆಚರಿಸಿ ಸಂಭ್ರಮಿಸೋಣ ಎಂದರು.

ಇನ್ನು ಬಕ್ರೀದ್ ಹಬ್ಬದ ನಿಮಿತ್ತ ಪಿ,ಎಸ್,ಐ, ಇವರು ಮಾತನಾಡಿ ತ್ಯಾಗ ಬಲಿದಾನದ ಸಂಕೇತವಾದ ಬಕ್ರೀದ್ ಹಬ್ಬವನ್ನು ಜಾತ್ಯಾತಿತವಾಗಿ ,ಧರ್ಮಾತಿತವಾಗಿ ಸಂತೋಷದಿಂದ ಹಿಂದೂ ಮುಸ್ಲಿಂ ಬಾಂಧವರು ಒಗ್ಗಟ್ಟಾಗಿ ಶಾಂತಿಯಿಂದ ಹಬ್ಬ ಆಚರಿಸಬೇಕು. ಶಾಂತಿಗೆ ಭಂಗ ತರುವವರನ್ನು ಮತ್ತು ಅಕ್ರಮವಾಗಿ ಗೋವು ಸಾಗಾಟ ಮಾಡಿ ಬಲಿ ಕೊಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.ಇನ್ನು ಯಾವುದೇ ಸಮುದಾಯವಾಗಿರಲಿ ಹಬ್ಬಗಳ ಆಚರಣೆ ವೇಳೆ ಅನ್ಯ ಧರ್ಮದ ಬಗ್ಗೆ ತಾತ್ಸಾರ ಮಾಡದೆ.ಶಾಂತಿಯುತವಾಗಿ ಆಚರಿಸಿದಾಗ ಮಾತ್ರ ಸಹಭಾಳ್ವೆ ಸಾಧ್ಯ ಎಂದರು. ಮತ್ತೊಬ್ಬರಿಗೆ ನೋವುಂಟು ಮಾಡುವುದು ಕಾನೂನಿನಲ್ಲಿ ಅಪರಾಧವಾಗಿದ್ದು,
ಸಭೆಯಲ್ಲಿನ ಮುಖಂಡರು ತಮ್ಮ ತಮ್ಮ ಸಮುದಾಯದ ಯುವಕರಿಗೆ ತಿಳಿ ಹೇಳಬೇಕೆಂದು ಮನವಿ ಮಾಡಿ…ಕಾನೂನು ಉಲ್ಲಂಘಿಸುವವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಲಾಗುವುದು. ಶಾಂತಿ ಭಂಗ ತರುವವರ ವಿರುದ್ಧ ಪೊಲೀಸರು ಕಣ್ಣಾವಲಿಟ್ಟಿದ್ದು. ಎಲ್ಲರೂ ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಬೇಕೆಂದು ಮುಸ್ಲಿಂ ಮತ್ತು ಜಾತ್ರೆಯ ಸಮಿತಿಯವರಿಗೆ ತಿಳಿಸಿದರು.

ಈ ಸಂದರ್ಭದಲ್ಲಿ ನಿವೃತ್ತ ಪೋಲಿಸ್ ಅಧಿಕಾರಿ ಬಾಲಚಂದ್ರ ಶಿಂಗ್ಯಾಗೋಳ, ಸಮಾಜದ ಹಿರಿಯರಾದ ಲಕ್ಷ್ಮಣ ಲಗಮಪ್ಪಗೋಳ,ಅಶೋಕ ಲಗಮಪ್ಪಗೋಳ,
ಶೇಖರ ಕೊಣ್ಣೂರ,ಜಯಶಾಲಿ ಕೊಣ್ಣೂರ,ನ್ಯಾಯವಾದಿಗಳಾದ ರಾಹುಲ ಮೆಳವಂಕಿ,ದನ್ಯಕುಮಾರ ಮೇಗೇರಿ,
ವೆಂಕಟೇಶ ಕೇಳಗೇರಿ,ಸದಾನಂದ ಶಿಂಗ್ಯಾಗೋಳ,
ವಿಠ್ಠಲ ಗುಡಜ ,ಮುಸ್ಲಿಂ ಸಮುದಾಯದ ಹಿರಿಯರಾದ ಸಾಜೀದ ಜಗದಾಳ,ಮುನ್ನಾ,ಪೊಲಿಸ್ ಸಿಬ್ಬಂದಿಗಳಾದ ಗೌಡಿ,
ನಾಗರಾಜ ದುರದುಂಡಿ,ಅಂತರಗಟ್ಟಿ ಇನ್ನು ಇತರರು ಸೇರಿದಂತೆ ಜಾತ್ರಾ ಮತ್ತು ಬಕ್ರೀದ್ ಹಬ್ಬದ ಶಾಂತಿ ಸಭೆಯಲ್ಲಿ ಉಪಸ್ಥಿತರಿದ್ದರು.


Spread the love

About Fast9 News

Check Also

ಅರ್ದ ದೇಹ ಸುಟ್ಟ ಮಹಿಳೆಯ ಶವ ಪತ್ತೆ.ಸಾಕ್ಷ ನಾಶ ಪಡಿಸಲು ಎಸಗಿರುವ ಕೃತ್ಯ. ಪೋಲೀಸರಿಂದ ತನಿಖೆ*

Spread the love*ಅರ್ದ ದೇಹ ಸುಟ್ಟ ಮಹಿಳೆಯ ಶವ ಪತ್ತೆ.ಸಾಕ್ಷ ನಾಶ ಪಡಿಸಲು ಎಸಗಿರುವ ಕೃತ್ಯ. ಪೋಲೀಸರಿಂದ ತನಿಖೆ* ಗೋಕಾಕ …

Leave a Reply

Your email address will not be published. Required fields are marked *