Breaking News

ಶಾಲೆಯಲ್ಲಿ ಹಾಜರಾತಿ ಹಾಕಿ ಮಕ್ಕಳನ್ನು ಕೊಚಿಂಗಗೆ ಕಳಿಸಿದ ಮುಖ್ಯ ಗುರುಗಳು,ಶಿಕ್ಷಕರು ಸಸ್ಪೆಂಡ್,,ಶಾಲಾ ಅನುಮತಿ ರದ್ದು…*

Spread the love

*ಶಾಲೆಯಲ್ಲಿ ಹಾಜರಾತಿ ಹಾಕಿ ಮಕ್ಕಳನ್ನು ಕೊಚಿಂಗಗೆ ಕಳಿಸಿದ ಮುಖ್ಯ ಗುರುಗಳು,ಶಿಕ್ಷಕರು ಸಸ್ಪೆಂಡ್,,ಶಾಲಾ ಅನುಮತಿ ರದ್ದು…*

*ಇಂದು ಬೆಳಗ್ಗೆ ಬೀದರ ಜಿಲ್ಲೆಯ ಔರಾದ ಪಟ್ಟಣ ದಲ್ಲಿ ಅನಧಿಕೃತವಾಗಿ ನಡೆಯುತಿರುವ ಕೊಚಿಂಗ್ ಕೇಂದ್ರಗಳ ಮೇಲೆ ದಾಳಿ ಮಾಡಲಾಗಿದೆ. ಒಟ್ಟು 1000. ಕ್ಕೂ ಹೆಚ್ಚು ಮಕ್ಕಳು ಪತ್ತೆಯಾಗಿದ್ದು ಅದರಲ್ಲಿ 609 ಮಕ್ಕಳು ಸರ್ಕಾರಿ ಶಾಲೆಯ ಮಕ್ಕಳು ಉಳಿದವರು ಖಾಸಗಿ ಶಾಲೆಯ ಮಕ್ಕಳಿದ್ದಾರೆ.ಇನ್ನು ಸರಕಾರಿ ಶಾಲೆಯವರಿಗೆ ಶಾಲೆಯಲ್ಲಿ ಸೌಲಭ್ಯ ನೀಡಿ ಬೊಗಸ್ ಹಾಜರಿ ಹಾಕುತ್ತಿರುವುದು ಕಂಡು ಬಂದಿದೆ.ಕೊಚಿಂಗ್ ತೆಗೆದುಕೊಳ್ಳುವಾಗ ಎಲ್ಲಾ ಮಕ್ಕಳ SATS ಪಡೆದುಕೊಂಡು ಆ ಮಕ್ಕಳು ಯಾವ ಶಾಲೆಯಲ್ಲಿ ಓದುತ್ತಿದ್ದಾರೆ ಎಂದು ಕಂಡು ಹಿಡಿದು ಅಂತಹ ಶಾಲೆಯ ಮುಖ್ಯೊಪಾದ್ಯಯರಿಗೆ,ಸಂಭಂದಪಟ್ಟ ವರ್ಗದ ಶಿಕ್ಷಕರನ್ನು ಸೇವೆಯಿಂದ ವಜಾಗೊಳಿಸಿ ಅವರ ಮೇಲೆ ಕ್ರಿಮಿನಲ್ ಕೇಸ್ ಹಾಕಲು ಪೋಲಿಸ್ ಅಧಿಕಾರಿಗಳು ತಿಳಿಸಿದ್ದಾರೆ.

ಕೊಚಿಂಗ್ ನಡೆಸುತಿದ್ದವರ ಜೊತೆಯಲ್ಲಿ ಹೊಂದಾಣಿಕೆ ಮಾಡಿಕೊಂಡು ಅನುದಾನಿತ /ಅನುದಾನರಹಿತ ಶಾಲಾ ಶಿಕ್ಷಕರು ಈ ಶಿಕ್ಷೆಗೆ ಗುರಿಯಾಗಿದ್ದಾರೆ.ಅನುದಾನ ರಹಿತ ಶಾಲೆಗೆ ನೀಡಿದ ಅನುಮತಿ ರದ್ದುಗೋಳಿಸಿ ಅವರ ಮೇಲು ಕ್ರಿಮಿನಲ್ ಕೇಸ್ ಹಾಕಲು ತಿಳಿಸಿದ್ದಾರೆ.ಈ ಪ್ರಕರಣ ದಲ್ಲಿ ಎಷ್ಟು ಜನ ಮುಖ್ಯಗುರುಗಳು ಹಾಗೂ ಶಿಕ್ಷಕರು ಮತ್ತು CRP ಗಳು ಕೆಲಸ ಕಳೆದುಕೋಳ್ಳುತ್ತಾರೋ ಕಾದು ನೋಡಬೇಕಾಗಿದೆ.SATS ಪರಿಣತಿ ತಂಡ ಔರಾದ ಗೆ ಬರುತ್ತಿದೆ. ಇದು ಕೇವಲ ಓರಾದ ಪಟ್ಟಣದಲ್ಲಿ ಮಾತ್ರ ಅಲ್ಲ ಬೆಳಗಾವಿಯ ಗೋಕಾಕ,ಮೂಡಲಗಿ ಶಿಕ್ಷಣ ವಲಯದಲ್ಲಿ ಹೆಚ್ಚಾಗಿ ಕೊಚಿಂಗ್ ಸೆಂಟರಗಳಿದ್ದು ಅಧಿಕಾರಿಗಳು ಯಾವಾಗ ಇಂತವರ ಮೇಲೆ ಕ್ರಮ ಕೈಗೊಳ್ಳುತ್ತರೋ ಕಾದು ನೋಡಬೇಕಾಗಿದೆ.


Spread the love

About Fast9 News

Check Also

ಕೊಣ್ಣೂರ ಪುರಸಭೆಗೆ ಅದ್ಯಕ್ಷರಾಗಿ ವಿನೋದ ಕರನಿಂಗ ,ಉಪಾದಕ್ಷರಾಗಿ ಯಲ್ಲವ್ವ ನಾಯಕ,ಅವಿರೋದ ಆಯ್ಕೆ.

Spread the loveಕೊಣ್ಣೂರ ಪುರಸಭೆಗೆ ಅದ್ಯಕ್ಷರಾಗಿ ವಿನೋದ ಕರನಿಂಗ ,ಉಪಾದಕ್ಷರಾಗಿ ಯಲ್ಲವ್ವ ನಾಯಕ,ಅವಿರೋದ ಆಯ್ಕೆ. ಗೋಕಾಕ: ತಾಲೂಕಿನ ಕೊಣ್ಣೂರ ಪುರಸಭೆಯ …

Leave a Reply

Your email address will not be published. Required fields are marked *